ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ತಿಂಗಳ ಹಿಂದೆ ಸತೀಶ್ ಸೈಲ್ ಅವರ ಮನೆಯಲ್ಲಿ ಭಾರೀ ಪ್ರಮಾಣದ ನಗದು-ಚಿನ್ನಾಭರಣ ಸಿಕ್ಕಿದ್ದು, ಅದರ ಮುಂದುವರೆದ ಭಾಗವಾಗಿ ಬಂಧನದ ಪ್ರಕ್ರಿಯೆ ನಡೆದಿದೆ.
ಮಂಗಳವಾರ ಇಡೀ ದಿನ ಇಡಿ ಅಧಿಕಾರಿಗಳು ಸತೀಶ್ ಸೈಲ್ ಅವರ ವಿಚಾರಣೆ ನಡೆಸಿದರು. ಸಂಜೆಯಾದರೂ ವಿಚಾರಣೆ ಮುಗಿಯದ ಕಾರಣ ಅವರನ್ನು ಬಂಧನಕ್ಕೆ ಒಳಪಡಿಸಿದರು. ಬೇಲಿಕೇರೆ ಅದಿರು ನಾಪತ್ತೆ ಪ್ರಕರಣ, ಅಕ್ರಮ ಹಣ ವರ್ಗಾವಣೆ ಕುರಿತು ವಿಚಾರಣೆ ನಡೆಯುತ್ತಿದೆ. ಜೊತೆಗೆ ಅವರ ಮನೆಯಲ್ಲಿ ಸಿಕ್ಕದ ಆಸ್ತಿ ದಾಖಲೆಗಳ ಬಗ್ಗೆಯೂ ಅಧಿಕಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ.
ಸತೀಶ್ ಸೈಲ್ ಅನಾರೋಗ್ಯದ ನೆಪವೊಡ್ಡಿ ಹೊರಗಿದ್ದರು. ಆದರೆ, ಅಧಿಕಾರಿಗಳು ಅದಕ್ಕೆ ಹೆಚ್ಚಿನ ಮನ್ನಣೆ ಕೊಡಲಿಲ್ಲ. ಅಗಸ್ಟ 13 ಹಾಗೂ 14ರಂದು ನಡೆದಿದ್ದ ದಾಳಿಯಲ್ಲಿ ಸಿಕ್ಕ ಚಿನ್ನಾಭರಣಗಳ ಆದಾಯದ ಮೂಲದ ಬಗ್ಗೆಯೂ ಅಧಿಕಾರಿಗಳು ಪ್ರಶ್ನಿಸಿದ್ದಾರೆ. 1.41 ಕೋಟಿ ರೂ ಹಣವನ್ನು ಸತೀಶ್ ಸೈಲ್ ಅವರು ಮನೆಯಲ್ಲಿರಿಸಿಕೊಂಡದನ್ನು ಅಧಿಕಾರಿಗಳು ಜಪ್ತು ಮಾಡಿದ್ದು, ಅದರ ದಾಖಲೆಗಳನ್ನು ಕೇಳಿದ್ದಾರೆ.
