ಹಳಿಯಾಳದ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇಗುಲದ ಬಾಗಿಲು ಹಾಗೂ ಚೌಕಟ್ಟಿಗೆ ಅಳವಡಿಸಿದ್ದ ಬೆಳ್ಳಿ ಪರಿಕ್ಕರಗಳನ್ನು ಕಳ್ಳರು ದೋಚಿದ್ದಾರೆ.
ಹಳಿಯಾಳ ಪಟ್ಟಣದ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಈ ದೇವಾಲಯವಿದೆ. ದೇವಾಲಯದ ಭದ್ರತೆಗೆ ಸಿಸಿ ಕ್ಯಾಮರಾ ಸಹ ಅಳವಡಿಸಲಾಗಿದೆ. ಅದಾಗಿಯೂ 6 ಲಕ್ಷ ರೂ ಮೌಲ್ಯದ ಆಭರಣಗಳು ಇಲ್ಲಿಂದ ಕಳ್ಳತನವಾಗಿದೆ.
ಹೆದ್ದಾರಿಗೆ ಹೊಂದಿಕೊAಡ ಈ ದೇಗುಲಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ಬಸ್ ನಿಲ್ದಾಣದ ಸಮೀಪದಲ್ಲಿ ದೇವಾಲಯವಿರುವುದರಿಂದ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅದೇ ರೀತಿ ಕಳ್ಳರು ಸಹ ಆಗಮನಿಸಿ, ಇಲ್ಲಿನ ಎಲ್ಲಾ ವಿಷಯ ಗಮನಿಸಿ ಕಳ್ಳತನ ನಡೆಸಿರುವ ಬಗ್ಗೆ ಅಂದಾಜಿಸಲಾಗಿದೆ.
ಸುಮಾರು ಕೆಜಿ ತೂಕದ ಬೆಳ್ಳಿ ಕವಚವನ್ನು ಕಳ್ಳರು ದೋಚಿದ್ದಾರೆ. ಪ್ರಸಿದ್ಧ ದೇಗುಲದಲ್ಲಿ ಈ ಬಗೆಯ ಕಳ್ಳತನ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
