• Latest
ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

uknews9.comby uknews9.com
in ವಾಣಿಜ್ಯ
ADVERTISEMENT

ದಟ್ಟವಾದ ಕಾಡು, ತಂಪಾಗಿ ಬೀಸುವ ಗಾಳಿ, ಜುಳು ಜುಳು ಹರಿಯುವ ಜಲ, ಅಡಿಕೆ ಮರದ ಸಾಲುಗಳನ್ನು ಆಹ್ವಾದಿಸುತ್ತ ಮಲೆನಾಡಿನ ಕುರುಕಲು ತಿಂಡಿ ತಿನ್ನುವ ಮೋಜು ಅನುಭವಿಸಿದವರಿಗೆ ಮಾತ್ರ ಗೊತ್ತು. ಹತ್ತಾರು ಜಲಪಾತ, ಬಗೆ ಬಗೆಯ ಚಾರಣ ಸ್ಥಳ, ಗುಡ್ಡಗಾಡು ಉತ್ಪನ್ನಗಳ ಖರೀದಿ, ಮನಸ್ಸು ಹಾಗೂ ದೇಹಕ್ಕೆ ಮದ ನೀಡುವ ಮಸಾಜ್, ಗುಣಮಟ್ಟದ ಊಟ-ಉಪಹಾರ ಸೇರಿ ಪ್ರವಾಸೋದ್ಯಮದ ಸಂಪೂರ್ಣ ಖುಷಿಪಡೆಯಬೇಕು ಎನ್ನುವವರು ಯಲ್ಲಾಪುರದ Uk Nature Stay‘ಗೆ ಬರಬೇಕು.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನಕ್ಷೆಗೆ ಯಲ್ಲಾಪುರದ `Uk Nature Stay‘ ಕೊಡುಗೆ ಅಪಾರ. ಒಂದೇ ಸಂಸ್ಥೆಯ ಅಡಿ ಹಲವು ಬಗೆಯ ಪ್ರವಾಸೋದ್ಯಮ ಚಟುವಟಿಕೆಗಳ ಅನುಭೂತಿಪಡೆಯಲು `ಯುಕೆ ನೇಚರ್ ಸ್ಟೇ‘ಗಿಂತ ಉತ್ತಮ ಸ್ಥಳ ಬೇರೆ ಇಲ್ಲ. `ಕಾಡು ಅರಿಯಬೇಕು. ಇಲ್ಲಿನ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಬೇಕು’ ಎಂದು ಬಯಸಿ ನಿರಂಜನ್ ಭಟ್ಟ ಅವರ ಒಡನಾಟಕ್ಕೆ ಬಂದವರಿಗೆ ಎಂದಿಗೂ ನಷ್ಟವಿಲ್ಲ. ಸ್ನೇಹಮಯ ವ್ಯಕ್ತಿತ್ವ, ಕುಟುಂಬದ ಪ್ರೀತಿ, ಮನೆ ಊಟದ ಸೊಬಗು, ಬಂಧು ಬಳಗದವರಿಂದಲೂ ಕೊಡಲಾಗದ ಆಥಿತ್ಯಕ್ಕೆ ಇಲ್ಲಿ ಎಂದಿಗೂ ಬರವಿಲ್ಲ.

ADVERTISEMENT

`ಪ್ರತಿ ದಿನವೂ ಹೊಸ ದಿನ’ ಎಂಬುದು ಯುಕೆ ನೇಚರ್ ಸ್ಟೇಯಲ್ಲಿನ ಆಯಾಮ. ಹೀಗಾಗಿ ಪ್ರತಿ ಬಾರಿಯೂ ಇಲ್ಲಿ ಹೊಸ ಹೊಸ ವಿಷಯ ಪರಿಚಯಿಸಲಾಗುತ್ತದೆ. ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಆಗಮಿಸುವ ಅತಿಥಿಗಳಿಗೆ ವಿಶೇಷವಾದ ನೀರಾ ಕೊಡುವ ಮೂಲಕ ಇಲ್ಲಿನ ಅತಿಥಿ ಸತ್ಕಾರ ಶುರುವಾಗಲಿದ್ದು, ಅವರವರ ಇಚ್ಚೆಗೆ ಅನುಸಾರವಾಗಿ ಊಟ-ಆಟ-ಪಾಠ ನಡೆಯುತ್ತದೆ. ಫೈರ್ ಕ್ಯಾಂಪ್, ಬಾಡಿ ಮಸಾಜ್, ಜಲ ಸಾಹಸ ಚಟುವಟಿಕೆ, ಈಜು-ಮೋಜು, ಇನ್ನಿತರ ಸಾಹಸಿ ಕ್ರೀಡೆಗಳು ಇಲ್ಲಿವೆ. ಸಂಜೆ ವೇಳೆಯ ಮನರಂಜನೆಗಾಗಿ ಯಕ್ಷಗಾನ, ಬುಡಕಟ್ಟು ನೃತ್ಯ ಸೇರಿ ಹಲವು ಸಾಂಪ್ರದಾಯಿಕ ಪದ್ಧತಿ ಜೀವಂತವಾಗಿರಿಸಿಕೊAಡಿದ್ದು ಇಲ್ಲಿನ ವಿಶೇಷ.

ಆಯುರ್ವೇದಿಕ್ ಮಸಾಜ್-ಅತ್ಯದ್ಬುತ ಅನುಭವ
ಹಳ್ಳಿ ಸೊಬಗಿನ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ, ಜೇನು ಕೃಷಿ, ಶಾಲಾ ಮಕ್ಕಳ ಪ್ರವಾಸ, ಅಪರೂಪದ ನೀರಾ ಮಾರಾಟ ಸೇರಿ ಈಗಾಗಲೇ ಹಲವು ಬಗೆಯ ಸೇವೆ ಒದಗಿಸುತ್ತಿರುವ ಯುಕೆ ನೇಚರ್ ಸ್ಟೇ ಸದ್ಯ `ಆಯುರ್ವೇದಿಕ್ ಮಸಾಜ್ ಸೆಂಟರ್’ ತೆರೆದಿದೆ. ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ಅವರ ಆರೋಗ್ಯ ವೃದ್ಧಿಗೆ ಮಸಾಜ್ ಮಾಡಬೇಕು ಎಂಬುದು ನೇಚರ್ ಸ್ಟೇ ಕನಸು. 1200ರೂ ದರದಲ್ಲಿ ನುರಿತ ಸಿಬ್ಬಂದಿ ಮೂಲಕ ಕಾಡಿನ ಸೊಪ್ಪು-ಶಕ್ತಿಯುತ ಬೇರುಗಳ ಎಣ್ಣೆ ಬಳಸಿ ಇಲ್ಲಿ ಮಸಾಜ್ ಮಾಡುತ್ತಿದ್ದಾರೆ.

ಪ್ರಾಚೀನ ಕಾಲದ ಪದ್ಧತಿ ಅನುಸರಿಸಿ ಅಪರೂಪದ ಗಿಡ ಮೂಲಿಕೆಗಳಿಂದ ತೆಗೆದ ಎಣ್ಣೆಯಿಂದ ಇಲ್ಲಿ ಮಸಾಜ್ ಮಾಡಲಾಗುತ್ತದೆ. ಸ್ನಾಯುವಿನ ಮೇಲಿನ ಒತ್ತಡ ನಿವಾರಣೆಗಾಗಿ ಪ್ರತಿಯೊಬ್ಬರು ಆಗಾಗ ಮಸಾಜ್ ಪ್ರಕ್ರಿಯೆಗೆ ಒಳಗಾಗುವುದು ಸೂಕ್ತ. ಅದರಲ್ಲಿಯೂ ಮಂಡಿ ನೋವು, ಕೈ-ಕಾಲು ನೋವು, ಬೆನ್ನು ನೋವು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಆಯುರ್ವೇದಿಕ್ ಮಸಾಜ್ ಪರಿಣಾಮಕಾರಿ. ದೇಹದಲ್ಲಿರುವ ವಿಷ ಹೋಗಲಾಡಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಆಯುರ್ವೇದಿಕ್ ಗಿಡ ಮೂಲಿಕೆಗಳ ಎಣ್ಣೆ ಬಳಸಿ ಮಾಡುವ ಮಸಾಜ್ ಪ್ರಯೋಜನಕರ.

ಇಲ್ಲಿ ಮಸಾಜ್ ಮಾಡಿಸಿಕೊಳ್ಳುವುದರಿಂದ ಎಲ್ಲಾ ಅಂಗಾoಗಗಳ ಬಳಿಯಲ್ಲಿನ ಮಾಂಸ-ಖoಡಗಳು ಬಲಗೊಳ್ಳುತ್ತವೆ. ಕೀಲು ನೋವು ಕಡಿಮೆ ಆಗುತ್ತದೆ. ದೇಹದ ಫ್ಲೆಕ್ಸಿಬಿಲಿಟಿ ಅಭಿವೃದ್ಧಿ ಆಗುತ್ತದೆ. ಚರ್ಮದಲ್ಲಿ ಪೌಷ್ಟಿಕಾಂಶಗಳು ಹೆಚ್ಚಾಗುತ್ತವೆ. ದೇಹದ ದುಗ್ಧರಸ ವ್ಯವಸ್ಥೆ ಉತ್ತೇಜಿತಗೊಳ್ಳುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳು ದೂರವಾಗುತ್ತವೆ. ದೇಹದ ತೂಕ ಕಡಿಮೆ ಆಗುತ್ತದೆ. ಕಣ್ಣುಗಳ ನೋವು ಕಡಿಮೆ ಆಗಿ ದೃಷ್ಟಿ ದೋಷ ಸರಿ ಹೋಗುತ್ತದೆ. ರಜೆ ಹಾಗೂ ವಾರಾಂತ್ಯದ ಅವಧಿಯಲ್ಲಿ ಮಸಾಜ್ ಮಾಡಿಸಿಕೊಳ್ಳಲು ಬರುವವರ ಸಂಖ್ಯೆ ಹೆಚ್ಚಿರುವುದರಿಂದ ಮುಂಚಿತವಾಗಿ 9449567673ಗೆ ಫೋನ್ ಮಾಡಿ ಮಾತನಾಡುವುದು ಉತ್ತಮ.

ಗ್ಲೋಬಲ್ ಅವಾರ್ಡ
9 ಎಕರೆ ವಿಶಾಲವಾದ ಯುಕೆ ನೇಚರ್ ಸ್ಟೇ ಆವರಣದಲ್ಲಿ ಪರಿಸರ ಸಮತೋಲನ ಕಾಪಾಡಲಾಗಿದೆ. ಹಲವು ಬಗೆಯ ಗಿಡಗಳಿವೆ. ಅದರಲ್ಲಿಯೂ ಮುಖ್ಯವಾಗಿ ಆಯುರ್ವೇದ ಸಸ್ಯಗಳ ಸಂರಕ್ಷಣೆಗೆ ಒತ್ತು ನೀಡಲಾಗಿದೆ. ಪಶ್ಚಿಮ ಘಟ್ಟದ ಮೂಲ ಸಂಸ್ಕೃತಿ ಉಳಿಸಿ ಬೆಳಸಲು ನೆರವಾಗುವ ರೋಸ್‌ವುಡ್, ಸ್ಯಾಂಡಲ್, ಸೀಸಮ್, ಮಾಟಿ, ಹೋಣೆ, ನಂದಿ, ಕೂಕಂ, ಸಂಪಿಗೆ ಮೊದಲ ಗಿಡಗಳನ್ನು ಹಾಗೇ ಉಳಿಸಿಕೊಂಡು ರೆಸಾರ್ಟ ನಿರ್ಮಿಸಲಾಗಿದೆ. ಬಗೆ ಬಗೆಯ ಹಣ್ಣು-ತರಕಾರಿಗಳನ್ನು ಇಲ್ಲಿ ಬೆಳೆಸಲಾಗಿದೆ. 50ರಷ್ಟು ಜೇನು ಗೂಡುಗಳಿದ್ದು, ಅತಿಥಿಗಳಿಗೆ ತಾಜಾ ಜೇನು ತುಪ್ಪದ ಜೊತೆ ಜೇನು ರಕ್ಷಣೆಯ ಪಾಠ ಮಾಡಲಾಗುತ್ತದೆ.

ಇನ್ನೂ 150 ಜನ ಒಟ್ಟಿಗೆ ಬಂದರೂ ಇಲ್ಲಿ ಊಟ-ವಸತಿ ಸೌಲಭ್ಯವಿದೆ. ವಿಶ್ವದ ಗಮನಸೆಳೆದ ಸಾತೋಡ್ಡಿ ಜಲಪಾತ, ಮಾಗೋಡು ಜಲಪಾತ, ಯಾಣ ಗುಹೆ, ವಿಭೂತಿ ಜಲಪಾತ, ಶಿವಪುರ ತೂಗು ಸೇತುವೆ, ಸಹಸ್ರಲಿಂಗ ಸೇರಿ ಅನೇಕ ಸ್ಥಳಗಳು ಇಲ್ಲಿಂದ ಹತ್ತಿರ. ನೈಸರ್ಗಿಕ ತಾಣಗಳನ್ನು ಗುರಿಯಾಗಿರಿಸಿಕೊಂಡು ಪ್ರವಾಸಿಗರನ್ನು ಅಲ್ಲಿ ಕರೆದೊಯ್ಯಲಾಗುತ್ತದೆ. ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧಿಪಡೆದ ಗಂಟೆ ಗಣಪತಿ ದೇವಾಲಯ ಸಹ ಇಲ್ಲಿಂದ 1ಕಿ.ಮೀ ದೂರದಲ್ಲಿದೆ. ಹಲವು ಸತ್ವಗಳನ್ನು ಒಳಗೊಂಡ ಸ್ಥಳೀಯ ಗಿಡಮೂಲಿಕೆ ಬಳಸಿ ಸಿದ್ಧಪಡಿಸಿದ ಕಷಾಯ ಸಹ ಯುಕೆ ನೇಚರ್ ಸ್ಟೇ ವಿಶೇಷಗಳಲ್ಲಿ ಒಂದು. ಯುಕೆ ನೇಚರ್ ಸ್ಟೇ ಸಾಧನೆ ಗಮನಿಸಿದ ವಿಶ್ವವಾಣಿ ಪತ್ರಿಕೆ ಈ ರೆಸಾರ್ಟಗೆ `ಗ್ಲೋಬಲ್ ಅಚ್ಯುಮೆಂಟ್ ಅವಾರ್ಡ’ ನೀಡಿ ಗೌರವಿಸಿದೆ. ಇದರೊಂದಿಗೆ ವಿಶ್ವವಾಣಿ ಹಾಗೂ ಲೋಕಧ್ವನಿ ಪತ್ರಿಕೆಯಲ್ಲಿ ನಿರಂಜನ್ ಭಟ್ಟ ಅವರ ಸಾಧನೆಯ ಬಗ್ಗೆ ವಿಶೇಷ ಲೇಖನ ಸಹ ಪ್ರಕಟವಾಗಿದೆ.

ಆಯುರ್ವೇದ ಮಸಾಜ್ ಕುರಿತು ಜನ ಹೇಳುವುದೇನು? ವಿಡಿಯೋ ಇಲ್ಲಿ ನೋಡಿ..

#Sponsored

ADVERTISEMENT

Discussion about this post

Previous Post

`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’

Next Post

ಮುಕಳೆಪ್ಪನ ಮದುವೆ: ಅಕ್ಕ.. ಅಕ್ಕ ಎನ್ನುತ್ತಿದ್ದವ ಆಕೆಯನ್ನೇ ಪಟಾಯಿಸಿದ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋