ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಸದ್ಯ ಸಕ್ರೀಯ ರಾಜಕಾರಣದಿಂದ ದೂರವಿದ್ದಾರೆ. Mobile Media Network ನಡೆಸಿದ ಜನಮತ ಸಮೀಕ್ಷೆಯಲ್ಲಿ ಶೇ 62.80ರಷ್ಟು ಜನ `ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅನಂತಕುಮಾರ ಹೆಗಡೆ ಅವರ ವಿಷಯವಾಗಿ Mobile Media Network ನಡೆಸಿದ ಜನಮತ ಸಮೀಕ್ಷೆಯಲ್ಲಿ ಒಟ್ಟು 49218ಜನ ಮತ ಚಲಾಯಿಸಿದ್ದರು. ಆ ಪೈಕಿ ಶೇ 62.80ರಷ್ಟು ಜನ `ಅನಂತಕುಮಾರ ಹೆಗಡೆ ಅವರು ರಾಜ್ಯ ರಾಜಕಾರಣಕ್ಕೆ ಬರಬೇಕು’ ಎಂದು ಹೇಳಿದ್ದಾರೆ. ಶೇ 16.26ರಷ್ಟು ಜನ `ಅನಂತಕುಮಾರ ಹೆಗಡೆ ಅವರು ರಾಜಕೀಯ ನಿವೃತ್ತಿಪಡೆಯಬೇಕು’ ಎಂದು ಹೇಳಿದ್ದಾರೆ. ಇದರೊಂದಿಗೆ ಶೇ 7.11ರಷ್ಟು ಜನ `ಅನಂತಕುಮಾರ ಹೆಗಡೆ ಅವರು ಕೇಂದ್ರ ರಾಜಕಾರಣದಲ್ಲಿರಬೇಕು’ ಎಂದು ಅನಿಸಿಕೆ ಹಂಚಿಕೊ0ಡಿದ್ದಾರೆ. ಜೊತೆಗೆ `13.82ರಷ್ಟು ಜನ `ಅನಂತಕುಮಾರ ಹೆಗಡೆ ಅವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ಸಿಗಬೇಕು’ ಎಂದು ಹೇಳಿದ್ದಾರೆ.
ಈಚೆಗೆ ಮೈಸೂರಿನ ಮಾಜಿ ಸಂಸದ ಪ್ರತಾಪ ಸಿಂಹ ಅವರು ಉತ್ತರ ಕನ್ನಡ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರನ್ನು ಸಕ್ರೀಯ ರಾಜಕಾರಣಕ್ಕೆ ಆಮಂತ್ರಿಸಿದ್ದರು. ಆದರೆ, ಇದಕ್ಕೆ ಅನಂತಕುಮಾರ ಹೆಗಡೆ ಅವರು ಯಾವುದೇ ರೀತಿಯಲ್ಲಿಯೂ ಪ್ರತಿಕ್ರಿಯಿಸಿರಲಿಲ್ಲ. ಸದ್ಯ ತಮ್ಮ ಉದ್ದಿಮೆ ಬೆಳಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅನಂತಕುಮಾರ ಹೆಗಡೆ ಅವರು ರಾಜಕೀಯ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ನಡುವೆ Mobile Media Network ನಡೆಸಿದ ಜನಮತ ಸಮೀಕ್ಷೆಯಲ್ಲಿ ಬಹುತೇಕರು `ಅನಂತಕುಮಾರ ಹೆಗಡೆ ಅವರು ರಾಜಕಾರಣಕ್ಕೆ ಮರಳಬೇಕು‘ ಎಂದೇ ಪ್ರತಿಕ್ರಿಯಿಸಿದ್ದಾರೆ.
ಇನ್ನೂ ಈ ಬಗ್ಗೆ ಅನಂತಕುಮಾರ ಹೆಗಡೆ ಅವರ ಅಭಿಪ್ರಾಯಪಡೆಯಲು ನಾವು ಅವರಿಗೆ ಫೋನ್ ಮಾಡಿದ್ದು, ಮೆಸೆಜ್ ಮಾಡುವಂತೆ ಅವರು ಸೂಚನೆ ನೀಡಿದರು. ಆದರೆ, ಜನಮತದ ಕುರಿತು ವಾಟ್ಸಪ್ ಮೂಲಕ ಮಾಡಿದ ಮೆಸೆಜ್’ಗೆ ನಂತರ ಮತ್ತೆ ಅವರು ಪ್ರತಿಕ್ರಿಯಿಸಲಿಲ್ಲ. `ಸದ್ಯ ಅನಂತಕುಮಾರ ಹೆಗಡೆ ಅವರು ತಟಸ್ಥರಾಗಿದ್ದರೂ ಮತ್ತೆ ಅವರು ರಾಜಕೀಯಕ್ಕೆ ಬಂದೇ ಬರುತ್ತಾರೆ. ಆ ಬಗ್ಗೆ ಯಾವುದೇ ಅನುಮಾನ ಬೇಡ’ ಎಂಬುದು ಅವರ ಅಭಿಮಾನಿಯೊಬ್ಬರ ಮಾತು.
