ದಾಂಡೇಲಿಯ ಅಂಗನವಾಡಿಯೊoದರಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕಿಗೆ ನಗರಸಭಾ ಸದಸ್ಯರೊಬ್ಬರು ಸರಸಕ್ಕೆ ಕರೆದಿದ್ದಾರೆ. ಈ ಬಗ್ಗೆ ಶಿಕ್ಷಕಿ ಪೊಲೀಸರ ಮೊರೆ ಹೋಗಿದ್ದು, ಅಂಗನವಾಡಿ ಶಿಕ್ಷಕಿಗೆ ನ್ಯಾಯ ಕೊಡಿಸಬೇಕು ಎಂದು ಕೆಲ ಸಂಘಟನೆಯವರು ಆಗ್ರಹಿಸಿದ್ದಾರೆ.
`ವರ್ಷದ ಹಿಂದೆ ಅಂಗನವಾಡಿ ಶಿಕ್ಷಕಿ ಅಂಗನವಾಡಿಯಲ್ಲಿದ್ದ ಆಹಾರ ಕದ್ದು ಸಾಗಿಸುತ್ತಿದ್ದರು. ಆ ವೇಳೆ ಊರಿನವರು ಹಿಡಿದಿದ್ದು, ಆಗ ನಗರಸಭಾ ಸದಸ್ಯ ದಶರಥ ಬಡ್ಡಿವಡ್ಡರ್ ಆಕೆಯನ್ನು ರಕ್ಷಿಸಿದ್ದರು. ಅವರಿವರ ಮೇಲೆ ಒತ್ತಡ ತಂದು ಪ್ರಕರಣ ಮುಗಿಸಿದ್ದರು. ಅದಾದ ನಂತರ ಆ ಶಿಕ್ಷಕಿಯ ಮೇಲೆ ದಶರಥ ಬಡ್ಡಿವಡ್ಡರ್ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಅಧ್ಯಕ್ಷೆ ರೇಣುಕಾ ಬಂದA ಮಾಧ್ಯಮದವರ ಮುಂದೆ ವಿವರಿಸಿದ್ದಾರೆ.
`ಶಿಕ್ಷಕಿಯ ಮೇಲೆ ದೌರ್ಜನ್ಯ ಎಸಗಿದ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಈ ಆಧಾರದಲ್ಲಿ ದೂರು ನೀಡಿದ್ದು, ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದವರು ಆಗ್ರಹಿಸಿದ್ದಾರೆ. ಯಾವುದೇ ಮಹಿಳೆಯರಿಗೆ ಅನ್ಯಾಯವಾದರೆ ನಮ್ಮ ಸಂಘಟನೆ ಹೋರಾಟ ನಡೆಸುತ್ತದೆ’ ಎಂದು ಈ ವೇಳೆ ಅವರು ಘೋಷಿಸಿದರು. ಸಂಘಟನೆ ಪ್ರಮುಖರಾದ ಹಸೀನಾ ಮಕಾಂದಾರ, ಮುಜಿಬಾ ಛಬ್ಬಿ, ಜಯಾ ನಾಯ್ಕ, ಸುಚಿತಾ ದೇವದಾಸ್, ದೀಪಾ ಅಚ್ಚಲಕರ್, ರೂಪಾ ಹೊಸೂರ, ಶಹಜಾದಿ ಕುಲ್ಸಾಪುರ ಇದ್ದರು.
