ಭಟ್ಕಳದ ಅಬ್ದುಲ್ ವಾಹಿದ್ ಅವರ ಮನೆ ಅಂಗಳದಲ್ಲಿದ್ದ ಎರಡು ಬೈಕುಗಳು ಬೆಂಕಿಗೆ ಆಹುತಿಯಾಗಿದೆ. ಪಕ್ಕದಮನೆಯ ತೌಸಿಪ್ ಜಬಾಲಿ ಹಾಗೂ ಸಾಧ್ ಜಬಾಲಿ ಬೆಂಕಿ ಹಚ್ಚಿದ ಕಿಡಿಗೇಡಿಗಳಾರಿಗುವ ಬಗ್ಗೆ ಅನುಮಾನವಿದೆ.
ಭಟ್ಕಳ ಪುರವರ್ಗದ 3ನೇ ಕ್ರಾಸಿನಲ್ಲಿ ಅಬ್ದುಲ್ ವಾಹಿದ್ ವಾಸವಾಗಿದ್ದಾರೆ. ಸೆಲ್ಸಮೆನ್ ಆಗಿರುವ ಅವರು ನಿತ್ಯದ ಕೆಲಸಕ್ಕಾಗಿ ಸ್ಕೂಟಿ ಮೇಲೆ ಓಡಾಡುತ್ತಾರೆ. ಅಗಸ್ಟ 7ರ ರಾತ್ರಿ 1 ಗಂಟೆ ಆಸುಪಾಸಿನಲ್ಲಿ ಅವರ ಮನೆ ಅಂಗಳದಲ್ಲಿದ್ದ ಸ್ಕೂಟಿಗೆ ಬೆಂಕಿ ಬಿದ್ದಿದೆ. ಜೊತೆಗೆ ಅದರ ಪಕ್ಕದಲ್ಲಿ ನಿಲ್ಲಿಸಿದ್ದ ಅವರ ಸಹೋದರ ಅಬ್ದುಲ್ ಪತಾ ಅವರ ಬೈಕಿಗೂ ಬೆಂಕಿ ತಗುಲಿದೆ.
ಪರಿಣಾಮ ಈ ಎರಡು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿದ್ದು, ಬೆಳಗ್ಗೆ ಎದ್ದು ನೋಡಿದಾಗ ಕುಟುಂಬದವರಿಗೆ ವಾಹನ ಸುಟ್ಟಿರುವುದು ಗೊತ್ತಾಗಿದೆ. ಬೈಕಿಗೆ ಹತ್ತಿದ ಬೆಂಕಿ ಮನೆ ಆವರಣವನ್ನು ಪ್ರವೇಶಿಸಿದ್ದು, ತಗಡಿನ ಶೀಟ್ ಸಹ ಸುಟ್ಟಿದೆ. ಮನೆ ಹಾಲ್ ಒಳಗೂ ಬೆಂಕಿ ಪ್ರವೇಶಿಸಿದ್ದು ಬೆಳಗ್ಗೆ ಕುಟುಂಬದವರ ಅರಿವಿಗೆ ಬಂದಿದೆ.
ಅಬ್ದುಲ್ ವಾಹಿದ್ ಅವರಿಗೆ ಪಕ್ಕದ ಮನೆಯ ತೌಸಿಪ್ ಜಬಾಲಿ ಹಾಗೂ ಸಾಧ್ ಜಬಾಲಿ ಬಗ್ಗೆ ಅನುಮಾನವಿದ್ದು, ಅವರೇ ಅಕ್ರಮವಾಗಿ ಮನೆಯೊಳಗೆ ಪ್ರವೇಶಿಸಿ ಬೆಂಕಿ ಹಚ್ಚಿದ ಬಗ್ಗೆ ಅಂದಾಜಿಸಿದ್ದಾರೆ. ಈ ಬಗ್ಗೆ ಭಟ್ಕಳ ಪೊಲೀಸರಿಗೂ ಅಬ್ದುಲ್ ವಾಹಿದ್ ದೂರು ನೀಡಿದ್ದಾರೆ.
