ಮೇಷ ರಾಶಿ: ಕೆಲಸದ ವಿಷಯದಲ್ಲಿ ಪ್ರಗತಿ ಸಾಧ್ಯವಾಗಲಿದೆ. ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಆರೋಗ್ಯದ ವಿಷಯದಲ್ಲಿ ಕಾಳಜಿ ಬೇಕು. ಎಚ್ಚರಿಕೆಯಿಂದ ವ್ಯವಹರಿಸಿ.
ವೃಷಭ ರಾಶಿ: ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆಗಳಿದೆ. ಶೈಕ್ಷಣಿಕ ವಿಷಯದಲ್ಲಿ ಸುಧಾರಣೆ ಕಾಣಲಿದೆ. ಕೆಲಸದ ವಿಷಯದಲ್ಲಿ ಸಾಧನೆ ಸಾಧ್ಯವಿದೆ.
ಮಿಥುನ ರಾಶಿ: ಹಣಕಾಸು ನಿರ್ವಹಣೆ ವಿಷಯದಲ್ಲಿ ಎಚ್ಚರಿಕೆಯಿರಲಿ. ಉತ್ತಮ ಯೋಜನೆಗಳನ್ನು ರೂಪಿಸಿ. ಚುರುಕಾಗಿ ಕಾರ್ಯನಿರ್ವಹಿಸಲು ಸಾಧ್ಯ.
ಕರ್ಕ ರಾಶಿ: ವಿದ್ಯಾರ್ಥಿಗಳಿಗೆ ಈ ದಿನ ಶುಭವಾಗಿರಲಿದೆ. ಹಿರಿಯರ ಬೆಂಬಲದಿAದ ಯಶಸ್ಸು ಸಿಗಲಿದೆ. ಪ್ರಯಾಣದ ಲಕ್ಷಣವಿದ್ದು, ನಿಧಾನವಾಗಿ ವಾಹನ ಓಡಿಸುವುದು ಅಗತ್ಯ.
ಸಿಂಹ ರಾಶಿ: ಆರ್ಥಿಕ ವಿಷಯಗಳ ಅಭಿವೃದ್ಧಿ ಆಗಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಮುನ್ನಚ್ಚರಿಕೆವಹಿಸಿ. ಜವಾಬ್ದಾರಿಗಳು ಹೆಚ್ಚಳವಾಗಲಿದೆ.
ಕನ್ಯಾ ರಾಶಿ: ಕುಟುಂಬದವರ ಬೆಂಬಲದಿoದ ಜೀವನ ಸುಧಾರಣೆ ಆಗಲಿದೆ. ನಿಮ್ಮ ಕೋಪ ನಿಯಂತ್ರಣದಲ್ಲಿದ್ದರೆ ಉತ್ತಮ. ಆರ್ಥಿಕ ಸ್ಥಿತಿ ಸುಧಾರಣೆ ಸಾಧ್ಯವಿದೆ.
ತುಲಾ ರಾಶಿ: ಕೆಲಸದ ವಿಷಯದಲ್ಲಿ ಕೆಲ ಬದಲಾವಣೆಗಳು ಸಾಧ್ಯವಿದೆ. ಆದಾಯ ವೃದ್ಧಿ ಆಗಲಿದೆ. ಕಾನೂನು ವಿಚಾರಗಳಲ್ಲಿ ಗೊಂದಲ ಬೇಡ.
ವೃಶ್ಚಿಕ ರಾಶಿ: ಕೆಲಸದಲ್ಲಿ ಉತ್ತಮ ಫಲ ಸಿಗಲಿದೆ. ವೈವಾಹಿಕ ಜೀವನ ಸುಧಾರಣೆ ಆಗಲಿದೆ. ಸಹದ್ಯೋಗಿಗಳ ಸಹಕಾರದಿಂದ ಕೆಲಸದ ಒತ್ತಡ ಕಡಿಮೆ ಆಗಲಿದೆ.
ಧನು ರಾಶಿ: ಆತುರದ ನಿರ್ಧಾರಗಳನ್ನು ಪ್ರಕಟಿಸಬೇಡಿ. ಮಕ್ಕಳ ಆರೋಗ್ಯದ ಕಡೆ ಗಮನಕೊಡುವುತ್ತ ಅಗತ್ಯ. ವ್ಯಾಪಾರದಲ್ಲಿ ಬೆಳವಣಿಗೆ ಆಗಲಿದೆ.
ಮಕರ ರಾಶಿ: ಕೆಲಸದ ಒತ್ತಡಗಳಿಂದ ಹೊರಬನ್ನಿ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಯಾರಿಗೂ ಸಾಲ ಕೊಡಬೇಡಿ.
ಕಂಭ ರಾಶಿ: ಯೋಗ್ಯವಾದ ಕಡೆ ಈ ದಿನ ಹೂಡಿಕೆ ಮಾಡಿದರೆ ಲಾಭ ಖಚಿತ. ಆರೋಗ್ಯದ ವಿಷಯದಲ್ಲಿ ಹಿನ್ನಡೆ ಆಗಬಹುದು. ಆತ್ಮವಿಶ್ವಾಸದಿಂದ ಕೆಲಸ ಮಾಡಿ.
ಮೀನ ರಾಶಿ: ಹಣಕಾಸು ವಿಷಯದಲ್ಲಿ ಲಾಭದ ನಿರೀಕ್ಷೆಯಿದೆ. ಹೊಸ ಯೋಜನೆ ಶುರು ಮಾಡಲು ಉತ್ತಮ ದಿನ. ನಿಮ್ಮ ಮನಸ್ಸು ನಿಯಂತ್ರಣದಲ್ಲಿರಲಿ.
