ದಾಂಡೇಲಿ : ಪೂರ್ವ ಪ್ರಾಥಮಿಕ ಶಾಲಾ (ಅಂಗನವಾಡಿ) ಶಿಕ್ಷಕಿಯರ ತರಬೇತಿಗಾಗಿ ದಾಂಡೇಲಿಯ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ, ಶಾರದಾ ಅಂಗನವಾಡಿ ಶಿಕ್ಷಕಿಯರ ತರಬೇತಿ ಕೇಂದ್ರದಲ್ಲಿ ಪ್ರವೇಶ ಪ್ರಾರಂಭವಾಗಿದೆ.
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಕೇಂದ್ರ ದೆಹಲಿ ಇವರಿಂದ ಮಾನ್ಯತೆ ಪಡೆದ ಕೇಂದ್ರ ಇದಾಗಿದ್ದು, ಅಂಗನವಾಡಿ ಶಿಕ್ಷಕರಾಗಲು ಹಾಗೂ ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಅರ್ಹತೆ ಇರುವ ತರಬೇತಿ ಇದಾಗಿದೆ. ಪ್ರಸಕ್ತ ವರ್ಷದ ಪ್ರವೇಶ ಪ್ರಾರಂಭವಾಗಿದ್ದು ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ, ಪಾಸಾದ ವಿದ್ಯಾರ್ಥಿಗಳು ಇದರ ಪ್ರವೇಶವನ್ನು ಪಡೆದುಕೊಳ್ಳಬಹುದು.
ಇದು ಒಂದು ವರ್ಷದ ತರಗತಿಯ ಅವಧಿಯಾಗಿದ್ದು ಎನ್.ಟಿ.ಸಿ. ಪ್ರವೇಶ ಪಡೆದವರಿಗೆ ಉಚಿತವಾಗಿ ಸಮವಸ್ತ್ರ, ಬೇಸಿಕ್ ಕಂಪ್ಯೂಟರ್ ತರಬೇತಿ, ಮೆಹಂದಿ ಡಿಸೈನಿಂಗ್ ತರಬೇತಿ ಹಾಗೂ ಇನ್ನಿತರೆ ತರಬೇತಿಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವ್ಯವಸ್ಥಾಪಕರಾದ ಜಲಜಾ ಬಿ. ವಾಸರೆ (9483798450) ಸಂಪರ್ಕಿಸುವಂತೆ ಕೋರಲಾಗಿದೆ.
