ಕಾರವಾರ:
ನಗರದ ಆರ್ಟಿಒ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಅದೃಷ್ಠವಷಾತ್ ಅಧಿಕಾರಿಗಳು ಪಾರಾದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕಚೇರಿಗೆ ಬಂದ ಅಧಿಕಾರಿಗಳು ಕಂಪ್ಯೂಟರ್ ಹಾಗೂ ಫ್ಯಾನ್ ಸ್ವಿಚ್ ಹಾಕಿದ್ದಾರೆ. ಈ ವೇಳೆ ಏಕಾಏಕಿ ವಾಯರ್ ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಕಂಪ್ಯೂಟರ್ ಗಳ ಕನೆಕ್ಷನ್ ತಪ್ಪಿಸಿ ಅನಾಹುತದಿಂದ ಪಾರಾಗಿದ್ದಾರೆ. ಅಲ್ಲದೇ ಶಾರ್ಟ್ ಸರ್ಕ್ಯೂಟ್ ನಿಂದ ಯಾರಿಗೂ ಅಪಾಯ ಸಂಭವಿಸದೇ ಕ್ಷೇಮವಾಗಿದ್ದಾರೆ. ಬಳಿಕ ಸಾಮಾಜಿಕ ಕಾರ್ಯಕರ್ತ ರಾಘು ನಾಯ್ಕ ಹಾಗೂ ಇತರ ಅಧಿಕಾರಿಗಳು ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ.
