ದಾಂಡೇಲಿ: ಅಂಬಿಕಾನಗರದ ವಿಶ್ವಧರ್ಮ ಸೇವಾ ಸಂಸ್ಥೆ, ಪಂಚಾಚಾರ್ಯ ಮಂದಿರದ ಶ್ರೀ ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ ಜಗದ್ಗುರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಸರ್ವಧರ್ಮ ಸಮ್ಮೇಳನವನ್ನು ೨೦೨೭ ಫೆಬ್ರುವರಿ ೨೩ ಮತ್ತು ೨೪ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ನಗರದ ಶ್ರೀ ಮೃತ್ಯುಂಜಯ ಮಠದ ಸಭಾಭವನದಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ೧೦೦೮ ಜಗದ್ಗುರುಗಳು ಅಂಬಿಕಾನಗರಕ್ಕೆ ಬರುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ. ಅವರನ್ನು ೧೦೦೮ ಕುಂಭಗಳೊAದಿಗೆ ಸ್ವಾಗತಿಸುವ ತಯಾರಿಯನ್ನು ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಹೋರ ರಾಜ್ಯಗಳಿಂದ ಭಕ್ತಾದಿಗಳು ಬರುತ್ತಾರೆ. ಹೋರಗಿನಿಂದ ಬರುವ ಭಕ್ತಾದಿಗಳಿಗೆ ಊಟೋಪಚಾರ, ಉಳಿದುಕೊಳ್ಳುವ ವ್ಯವಸ್ಥೆಗೆ ಯಾವುದೇ ಕುಂದು ಕೊರತೆ ಆಗದಂತೆ ಕಾರ್ಯಕ್ರಮವನ್ನು ಚಂದಗಾನಿಸಬೇಕು ಎಂದರು.
ಸಭೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿ.ಎಸ್.ಪಾಟೀಲ ಪ್ರಮುಖರಾದ ಬಸವರಾಜ ಕಲಶೆಟ್ಟಿ, ಶಂಕರ ಜಡೆಹಿರೇಮಠ, ಶಿವದೇವ ದೇಸಾಯಿಸ್ವಾಮಿ, ಗಣಪತಿ ಕಂಕಣವಾಡಿ, ಡಾ.ಶೇಖರ ಹಂಚಿನಾಳಮಠ, ಮಲ್ಲಿಕಾರ್ಜುನ ರಾವ ಅಶೋಕ ಪಾಟೀಲ, ಬಿ.ಎ.ನಾಗಶೆಟ್ಟಿಕೊಪ್ಪ ಇನ್ನಿತರರು ಉಪಸ್ಥಿತರಿದ್ದರು.
