ಭಟ್ಕಳ:
ಮಧ್ಯರಾತ್ರಿ 3:45 ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಗೋವನ್ನು ಕದ್ದೊಯ್ಯತಿದ್ದಾಗ ವಿವೇಕಾನಂದ ನಗರ ಗ್ರಾಮಸ್ಥರು ಆರೋಪಿಗಳನ್ನ ಸೇರೆಹಿಡಿವಾಗಲೇ ವಾಹನದಲ್ಲಿ ಮೊಬೈಲ್ ಬಿಟ್ಟು ಪರಾರಿಯಾಗಿದ್ದಾರೆ
ಆರೋಪಿಗಳು ಪಕ್ಕದ ಅರಣ್ಯ ಪ್ರದೇಶದಲ್ಲಿ ಅವಿತು ಇನ್ನೊಂದು ಗೋ ಕಳ್ಳರ ತಂಡಕ್ಕೆ ಪೋನಿನ ಕರೆ ಮೂಲಕ ಘಟನಾ ಸ್ಥಳಕ್ಕೆ ಕರೆಯಿಸಿದ್ದು ನಂತರ ಗ್ರಾಮಸ್ಥರು ಭಟ್ಕಳ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಕರಿಕಲ್ ರಸ್ಥೆಯ ಸೀತಾರಾಮ್ ಬ್ಯಾಂಕಿನ ಹಿಂಬದಿ ಅವಿತು ಕುಳಿತಾಗ ಪೋಲಿಸರು ಹಾಗೂ ಗ್ರಾಮಸ್ಥರು ಸೇರೆ ಹಿಡಿಯುವಾಗಲೆ ಬೈಕ್ ಬಿಟ್ಟ ಪರಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ದಿನನಿತ್ಯ ಸಾಕಿ ಸಲಗಿದ ಗೋವುಗಳ ಕದ್ದೊಯುತ್ತಿರುವ ಗೋ ಕಳ್ಳರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಆರೋಪಿಗಳ ಸ್ವಿಪ್ಟ್ ಕಾರ್ ಅಸಲಿ ನಂಬರ್ ಜೊತೆ ಹಿಂದೂಗಳ ಹೆಸರಿರುವ ನಂಬರ್ ಪ್ಲೇಟ್ ಹಾಕಿ ಬಾರಿ ಹೈಡ್ರಾಮ ಸ್ರಷ್ಟಿಸಿದ್ದಾರೆ. ಈಕುರಿತು ಪೋಲಿಸರು ತನಿಖೆ ಕೈಗೊಂಡಿದ್ದಾರೆ.
