ದಾಂಡೇಲಿ : ನಗರದ ಹಾರ್ನಬಿಲ್ ಸಭಾಭವನದಲ್ಲಿ ಜಿಲ್ಲಾ ಜನಸೇನಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಲಾಯಿತು.
ಕು.ಭಾರತಿ ಮತ್ತು ತಂಡದಿಂದ ಸಂವಿಧಾನ ಪೀಠಿಕೆ ವಾಚನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನ ಸೇನಾ ಸಮಿತಿಯ ಅಧ್ಯಕ್ಷ ರಾಜಶೇಖರ್ ಐ.ಎಚ್ ಅವರು ಮಾತನಾಡಿ ಜಿಲ್ಲಾ ಜನಸೇನಾ ಸಮಿತಿ ಎಂದರೆ ಏನು? ಎಂಬ ಪ್ರಶ್ನೆ ಹಲವರ ಮನಸ್ಸಿನಲ್ಲಿದೆ. ಇದು ಕೇವಲ ಒಂದು ಹೆಸರಲ್ಲ,ಅನ್ಯಾಯದ ವಿರುದ್ಧದ ಕಿಚ್ಚು. ಇದು ಕೇವಲ ಒಂದು ಸಂಘಟನೆಯಲ್ಲ, ಇದು ಜನರ ನೋವಿಗೆ ಸ್ಪಂದಿಸುವ ಒಂದು ಭಾವನೆಯಾಗಿದೆ. ಐದು ಪ್ರಮುಖ ಸಂಕಲ್ಪಗಳೊಂದಿಗೆ ಜಿಲ್ಲಾ ಜನಸೇನಾ ಸಮಿತಿ ಹುಟ್ಟಿಕೊಂಡಿದೆ. ಸಾಮಾಜಿಕ ನ್ಯಾಯದ ಜಾಗೃತಿ, ಕಾನೂನಿನ ರಕ್ಷಣೆ, ಜನರ ಧ್ವನಿಯಾಗಿ ನಿಲ್ಲುವುದು, ಭ್ರಷ್ಟಾಚಾರದ ವಿರುದ್ಧ ಸಮರ ಮತ್ತು ಐಕ್ಯತೆಯ ಯ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದರು.ಹೈಕೋರ್ಟ್ ನ್ಯಾಯವಾದಿ ಗುರುರಾಜ್ ತಿರುಮುರಿ ಅವರು ಮಾತನಾಡಿ ಜನಸೇನಾ ಸಮಿತಿ ಜನರ
ಧ್ವನಿಯಾಗಿ ಇಡೀ ಜಿಲ್ಲೆಯಲ್ಲಿ ಛಾಪು ಮೂಡಿಸಲಿ ಎಂದರು. ಸಮಾಜ ಸೇವಕ ರವಿ ರೇಡ್ಕರ್ ಮತ್ತು ನ್ಯಾಯವಾದಿ ಕೃಷ್ಣ ನಾಯಕ ಅವರು ಶುಭಹಾರೈಸಿದರು.
ವೇದಿಕೆಯಲ್ಲಿ ನ್ಯಾಯವಾದಿಗಳಾದ ದೇಸಾಯಿ ಮತ್ತು ವಿಶ್ವನಾಥ ಲಕ್ಷಟ್ಟಿ, ಪ್ರಮುಖರಾದ ನಿವೃತ್ತ ಯೋಧ ನಾಮದೇವ ಸುನೀಲ ಮಾಲ್ವದೆ, ಸಾಗರ್ ಜಾದವ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಸೇನ ಪದಾಧಿಕಾರಿಗಳಾದ ರೋಹಿತ್ ಮಾಲವಾದೆ. ಪ್ರಶಾಂತ್ ನಾಯಕ್, ಸಿಲೋಮಾನ್ ಶೇಖ, ಹರೀಶ್ ಖಾದರ್, ರಾಜಶೇಖರ್ ನಿಂಬಾಲ್ಕರ್, ಮಹಮ್ಮದ್ ಅಕ್ಟರ್, ಜಿಲ್ಲಾ ಜನ ಸೇನಾ ಪದಾಧಿಕಾ-ರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
