ಮೇಷ ರಾಶಿ: ನಿಮ್ಮೊಳಗಿರುವ ಉತ್ಸಾಹ ನಿಮಗೆ ಯಶಸ್ಸು ಕೊಡಲಿದೆ. ಕೌಟುಂಬಿಕ ಸಮಸ್ಯೆ ದೂರವಾಗಲಿದೆ. ಹೊಸ ಆದಾಯದ ಮೂಲ ಸಿಗಲಿದೆ. ಆರೋಗ್ಯ ಸುಧಾರಣೆ ಸಾಧ್ಯ.
ವೃಷಭ ರಾಶಿ: ಕೆಲಸದ ಸ್ಥಳದಲ್ಲಿ ಸ್ಪೂರ್ತಿ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಲಾಭ ಉತ್ತಮ ನಿರ್ಧಾರ. ಒತ್ತಡ ನಿವಾರಣೆಗಾಗಿ ಧ್ಯಾನ ಮಾಡುವುದು ಸೂಕ್ತ.
ಮಿಥುನ ರಾಶಿ: ಬುದ್ಧಿವಂತಿಕೆಯಿoದ ಯೋಚಿಸಿದ ಕೆಲಸ ಫಲ ಕೊಡುತ್ತದೆ. ಹೊಸ ವಿಷಯ ಹಾಗೂ ಹೊಸ ಯೋಜನೆ ಕಾರ್ಯರೂಪಕ್ಕೆ ತರಲು ಸಕಾಲ.
ಕರ್ಕ ರಾಶಿ: ಆಗು-ಹೋಗುಗಳ ಜೊತೆ ಆತ್ಮಾವಲೋಕನ ಮಾಡಿಕೊಳ್ಳಿ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ಪ್ರೀತಿ-ಪ್ರೇಮದ ವಿಷಯ ಸುರಳಿತ. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ.
ಸಿಂಹ ರಾಶಿ: ನಾಯಕತ್ವ ಗುಣ ಬೆಳಕಿಗೆ ಬರುತ್ತದೆ. ನಿಮ್ಮ ವ್ಯಕ್ತಿತ್ವ ಬೇರೆಯವರನ್ನು ಆಕರ್ಷಿಸುತ್ತದೆ. ಆರೋಗ್ಯ ಹಾಗೂ ಸಮಯ ನಿರ್ವಹಣೆಗೆ ಒತ್ತು ಕೊಡುವುದು ಸೂಕ್ತ.
ಕನ್ಯಾ ರಾಶಿ: ವ್ಯವಹಾರದಲ್ಲಿ ಸ್ಪಷ್ಠತೆ ಬೇಕು. ಹಣಕಾಸು ಯೋಜನೆ ಕ್ರಮಬದ್ಧವಾಗಿದ್ದರೆ ಯಶಸ್ಸು ಸಿಗುತ್ತದೆ. ಸಹಕಾರಿ ತತ್ವ ಮರೆಯದಿರಿ. ವಿಶ್ರಾಂತಿಯಿoದ ನೆಮ್ಮದಿ ಸಾಧ್ಯ.
ತುಲಾ ರಾಶಿ: ಸಾಮಾಜಿಕ ಮನ್ನಣೆಗಾಗಿ ತಾಳ್ಮೆ ಅಗತ್ಯ. ಖರ್ಚು-ವೆಚ್ಚ ನಿಯಂತ್ರಿಸುವುದು ಉತ್ತಮ. ಕಲಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ. ಶಾಂತಚಿತ್ತವಾಗಿರಿ.
ವೃಶ್ಚಿಕ ರಾಶಿ: ಭಾವನಾತ್ಮಕ ವಿಷಯದಲ್ಲಿ ಬದಲಾವಣೆಯಾಗಲಿದೆ. ನಿಮ್ಮ ನಿರ್ಧಾರಗಳು ಸ್ಪಷ್ಠವಾಗಿರಲಿ. ಸಹಾಯ ಕೇಳಿದವರ ಮನಸ್ಸು ನೋಯಿಸಬೇಡಿ. ಮನಸ್ಸಿನ ಒತ್ತಡ ಪರಿಹಾರಕ್ಕೆ ಪ್ರಯತ್ನಿಸಿ.
ಧನು ರಾಶಿ: ಹೊಸ ಅನುಭವ ಹಾಗೂ ಅನ್ವೇಷಣೆಗೆ ಸೂಕ್ತ ದಿನ. ದಿಢೀರ್ ನಿರ್ಧಾರ ಮಾಡಬೇಡಿ. ಆಹಾರ ಪದ್ಧತಿ ಬದಲಾವಣೆ ಮಾಡುವುದು ಉತ್ತಮ. ಆರೋಗ್ಯ ಸುಧಾರಣೆಗೆ ವ್ಯಾಯಾಮ ಮಾಡಿ.
ಮಕರ ರಾಶಿ: ಪ್ರಯೋಗ ಹಾಗೂ ಚಿಂತನೆ ಬದಲಾವಣೆಯಿಂದ ಕೆಲಸದಲ್ಲಿ ಉನ್ನತಿ ಸಿಗಲಿದೆ. ನಿಮ್ಮ ಕಾರ್ಯತಂತ್ರ ವಿಧಾನಗಳು ಬೇರೆಯವರ ಗಮನಸೆಳೆಯಲಿದೆ. ಹಣಕಾಸು ವಿಷಯದಲ್ಲಿ ಭದ್ರತೆ ಸಿಗಲಿದೆ.
ಕುಂಭ ರಾಶಿ: ಸೃಜನಶೀಲ ದೃಷ್ಟಿಕೋನದಿಂದ ಬದಲಾವಣೆ ಸಾಧ್ಯ. ಆರೋಗ್ಯದ ವಿಷಯದಲ್ಲಿ ಸುಧಾರಣೆ ಆಗಲಿದೆ. ಸರ್ಕಾರಿ ನೌಕರರು ಎಚ್ಚರಿಕೆಯಿಂದಿರುವುದು ಅಗತ್ಯ.
ಮೀನ ರಾಶಿ: ಆರಾಮದಾಯಕ ಜೀವನಕ್ಕಾಗಿ ಧ್ಯಾನ ಹಾಗೂ ಯೋಗ ಅಗತ್ಯ. ಉದ್ಯೋಗ ಪ್ರಗತಿ ಬಗ್ಗೆ ಚಿಂತಿಸಿ. ಉತ್ತಮ ಆಹಾರದಿಂದ ಆರೋಗ್ಯ ಕಾಪಾಡಿಕೊಳ್ಳಿ.
