ಹಳಿಯಾಳದ ಗುರುಪಾದ ಮಹಾದೇವ ಚಕ್ರಸಾಲಿ ಅವರು ಸ್ನಾನಕ್ಕೆ ಹೋದಾಗ ಕಾಲು ಜಾರಿ ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಹಳಿಯಾಳ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಲ್ಲಿ ಗುರುಪಾದ ಮಹಾದೇವ ಚಕ್ರಸಾಲಿ (31) ಅವರು ಕೆಲಸ ಮಾಡುತ್ತಿದ್ದರು. ಸೆ 3ರಂದು ಅವರು ತಮ್ಮ ಮನೆಯಲ್ಲಿನ ಸ್ನಾನಗೃಹಕ್ಕೆ ಹೋದಾಗ ಕಾಲು ಜಾರಿ ಬಿದ್ದಿದ್ದರು. ಗಂಭೀರವಾಗಿ ಪೆಟ್ಟು ಮಾಡಿಕೊಂಡಿದ್ದರು.
ಹೀಗಾಗಿ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲು ಮಾಡಲಾಗಿತ್ತು. ಆದರೆ, ಅಲ್ಲಿನ ಚಿಕಿತ್ಸೆ ಫಲಿಸಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿದರೂ ಗುರುಪಾದ ಚಕ್ರ ಸಾಲಿ ಅವರು ಬದುಕಲಿಲ್ಲ.
