ಸಿದ್ದಾಪುರ – ಶಿರಸಿ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸು ಮೊನ್ನೆ ರಾತ್ರಿ ಮಣ್ಣಿನ ಧರೆಗೆ ಗುದ್ದಿದ್ದರಿಂದ 28 ಪ್ರಯಾಣಿಕರು ಗಾಯಗೊಂಡಿದ್ದು, ಅನೇಕರು ಹಲ್ಲು ಮುರಿದುಕೊಂಡಿದ್ದಾರೆ. ಬಾಯಿಂದ ರಕ್ತ ಬರುತ್ತಿದ್ದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಮನೆಗೆ ಕಳುಹಿಸಲಾಗಿದೆ.
ಶಿರಸಿ ಕಳವೆಯ ವೆಂಕಟ್ರಮಣ ಗೌಡ ಅವರು ಅನುಭವಿ ಚಾಲಕರು. ಅದಾಗಿಯೂ ಅವರು ಚಾಲನೆಯಲ್ಲಿ ತೋರಿದ ಸಣ್ಣ ನಿರ್ಲಕ್ಷö್ಯ ಪ್ರಯಾಣಿಕರಿಗೆ ಸಮಸ್ಯೆ ಮಾಡಿತು. ಸೆಪ್ಟೆಂಬರ 7ರ ಸಂಜೆ ವೆಂಕಟ್ರಮಣ ಗೌಡ ಅವರು ತಾವು ಓಡಿಸುತ್ತಿದ್ದ ಬಸ್ಸನ್ನು ಧರೆಗೆ ಗುದ್ದಿದರು. ಏಕಾಏಕಿ ಬಸ್ಸು ಧರೆಗೆ ಗುದ್ದಿದ್ದರಿಂದ ಅನೇಕ ಪ್ರಯಾಣಿಕರು ಹಲ್ಲು ಮುರಿದುಕೊಂಡರು.
ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿ ಅಜ್ಜಿಬಾಳದ ಬಳಿ ಈ ಅಪಘಾತ ನಡೆಯಿತು. ಜೋರಾಗಿ ಬಂದ ಬಸ್ಸು ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆಯಿತು. ಪರಿಣಾಮ ಬಸ್ಸಿನಲ್ಲಿದ್ದ ನೇತ್ರಾವತಿ ನಾಯ್ಕ, ಪವೀತ್ರಾ ಹೆಗಡೆ, ಮಹಾದೇವಿ ಯರಗೊಪ್ಪ ಅವರ ಹಲ್ಲು ಮುರಿಯಿತು. ಮಹಾಬಲೇಶ್ವರ ನಾಯ್ಕ, ಜನಾರ್ಧನ ಭಟ್ಟ, ನಾಗವ ಬೆಳವಾಡಿ, ಸ್ವಾತಿ ಬೆಳೆವಡಿ, ಕಮಲವ್ವ ಯರಗೊಪ್ಪ ಅವರ ಕೈ ಕಾಲುಗಳಿಗೆ ಪೆಟ್ಟಾಯಿತು.
ಅದೆ ಬಸ್ಸಿನಲ್ಲಿದ್ದ ಅಭೀನಂದನ ಚೌಗಲೆ, ಪ್ರೇಮಲತಾ ರೇವಣಕರ್, ನಿತೇಶ ರೇವಣಕರ್, ಭೀಮಪ್ಪ ಚನ್ನಪ್ಪ, ಸುಶ್ಮಿತಾ ಹೆಗಡೆ, ಶಾಂತಮ್ಮ ಶೆಟ್ಟರ್, ಭಾಗ್ಯ ಮೋದಗಿ, ರುತ್ವೀಕಾ ಮೋದಗಿ ಅವರಿಗೂ ಅಲ್ಲಲ್ಲಿ ನೋವಾಯಿತು. ಆಂಟೋನಿ ವಾಜ್, ಬೇಬಿ ಆಯುಷಾ ಹಾಲೂರು, ಪ್ರಕಾಶ ನಾಯ್ಕ, ನೂರ್ ಮಹ್ಮದ್ ಖಾದರ್ ಖಾನ್, ಇಸ್ಮಾಯಲ್ ಸಾಬ್, ರಜಿನಾ ಶೇಖ್ ಮೈದುನಾ, ತಾರಿಹಿಬಿ ಸಾಬ್, ಆಸಿಪ್ ಇಸ್ಮಾಯಲ್, ಅಮಿದಾ ಬೊಂದಿ, ಬಾಲಚಂದ್ರ ಹೆಗಡೆ, ಸುರೇಶ ಪಿಪಿ ಸಹ ಬಸ್ಸು ಅಪಘಾತದಿಂದ ಪೆಟ್ಟು ಮಾಡಿಕೊಂಡರು.
ಗಾಯಗೊoಡವರೆಲ್ಲರೂ ಚಿಕಿತ್ಸೆಪಡೆದು ಮನೆ ಸೇರಿದರು. ಅಪಘಾತ ನೋಡಿದ ಬನವಾಸಿಯವ ಮಾಲತೇಶ ಪರಗಣ್ಣನವರ್ ಅವರು ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿದರು.
