ದಾಂಡೇಲಿ/ಜೋಯಿಡಾ: ಜೋಯಿಡಾ ತಾಲೂಕಿನ ಗಣೇಶಗುಡಿ ಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಸೆ.25 ರಂದು ದಲಿತ ಸಮುದಾಯದ ಸಿಬ್ಬಂದಿಗಳ ಮೇಲೆ ನಡೆದ ದೌರ್ಜನ್ಯದ ಸಂಬಂಧ ರಾಮನಗರ ಪೊಲೀಸ್ ಠಾಣೆಯಲ್ಲಿ ಸೆ. 27 ರಂದು ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಸಂಬಂಧಿಸಿದ ವ್ಯಕ್ತಿಗಳನ್ನು ಇವತ್ತಿನವರೆಗೂ ಬಂಧಿಸದೆ ಇರುವುದನ್ನ ವಿರೋದಿಸಿ ದಲಿತ ಸಂಘಟನೆಗಳಾದ ಕರ್ನಾಟಕ ಭೀಮ್ ಸೇನೆ ಸಮಿತಿ ಬೆಂಗಳೂರು(ರಿ), ಭೀಮರಾವ್ ಮಹಾನಾಯಕ ಡಾ|| ಬಾಬಾ ಸಾಹೇಬ ಅಂಬೇಡ್ಕರ್ ಸೇನೆ, ಆದಿ ಜಾಂಬವಂತ ಸಂಘಟನೆ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜಿಲ್ಲಾ ಜಾಗೃತ ಉಸ್ತುವಾರಿ ಸಮಿತಿ ಮತ್ತು ಜಿಲ್ಲಾ ದೌರ್ಜನ್ಯ ತಡೆ ಸಮಿತಿಯ ಮುಖಂಡರು ಹಾಗೂ ಸದಸ್ಯರು ಇಂದು ಬೆಳಿಗ್ಗೆ ನಗರದ ಡಿವೈಎಸಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಡಿವೈಎಸಪಿ ಗಿರೀಶ ಬಿ ಅವರಿಗೆ ಮನವಿ ಸಲ್ಲಿಸಿದರು.
