ದಾಂಡೇಲಿ: ದಾಂಡೇಲಿ ನವರಾತ್ರಿ ಉತ್ಸವ ಸಮಿತಿ ವತಿಯಿಂದ ಜನತೆಗೆ ವಿಶಿಷ್ಟ ಮತ್ತು ವಿನೂತನ ಧಾರ್ಮಿಕ ಮತ್ತು ಮನೋರಂಜನಾ ಕಾರ್ಯಕ್ರಮ ನೀಡಬೇಕೆನ್ನುವ ಉದ್ದೇಶದಿಂದ ದಾಂಡೇಲಿಯ ಹಳೇ ನಗರಸಭಾ ಮೈದಾನದಲ್ಲಿ ನಮ್ಮ ಉತ್ಸವ, ನಮ್ಮ ಹಬ್ಬ ಘೋಷವಾಕ್ಯದಡಿ ಶ್ರೀ ದುರ್ಗಾ ದೇವಿಯ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಸಮಿತಿ ಗೌರವಾಧ್ಯಕ್ಷ ಶಾಸಕ ಸುನೀಲ ಹೆಗಡೆ ಹಾಗೂ ಪ್ರಮುಖರಾದ ಟಿ.ಎಸ್. ಬಾಲಮಣಿ ದಂಪತಿಗಳು ಪೂಜೆ ನೇವರಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ದುಷ್ಟರ ಸಂಹಾರದ ವಿಜಯೋತ್ಸವದ ಭಾಗವಾಗಿ ನಡೆಯುವ ಈ ಉತ್ಸವದಲ್ಲಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪಿಸಿ, ಒಂಬತ್ತು ದಿನಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಆರಾಧಿಸಿ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಶಿಷ್ಟ್ಯ ಪೂರ್ಣವಾಗಿ ಆಚರಿಸಲಾಗುತ್ತಿದೆ.ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಆರತಿ, ಪೂಜೆ ಹಾಗೂ ಪ್ರಸಾದ ವಿತರಣೆ ಇರುತ್ತದೆ. ಹಳೆ ನಗರಸಭಾ ಮೈದಾನದಲ್ಲಿ ಅಲಂಕೃತಗೊಂಡ ಭವ್ಯ ವೇದಿಕೆಯಲ್ಲಿ ಶೃಂಗಾರ ಮೂರ್ತಿಗೆ ವಿಶೇಷ ಪೂಜೆ, ದೇವಿಗೆ ಇಷ್ಟವಾದ ದಾಂಡಿಯಾ ಹಾಗೂ ಸ್ಪರ್ಧೆಗಳು, ಸ್ಥಳೀಯ ಹಾಗೂ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮೊದಲ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ಸಹ್ಯಾದ್ರಿ ಲಲಿತ ಕಲಾ ಕೇಂದ್ರ ಹಾಗೂ ಸುಸ್ವರ ಸಂಗೀತ ವಿದ್ಯಾ ಸಂಸ್ಥೆಯಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಅಶುತೋಷ್ ಕುಮಾರ್ ರಾಯ, ಪ್ರಧಾನ ಕಾರ್ಯದರ್ಶಿ ನರೇಂದ್ರ ಚೌವ್ಹಾಣ್ ಪ್ರಮುಖರಾದ ಟಿ.ಎಸ್.ಬಾಲಮಣಿ, ಗುರು ಮಠಪತಿ, ಬುದವಂತಗೌಡ ಪಾಟೀಲ್, ರೋಷನ್ ನೇತ್ರಾವಳಿ, ಮುಸ್ತಾಕ ಐವಾ, ಸುಧಾಕರ ಶೆಟ್ಟಿ, ದಶರಥ ಬಂಡಿವಡ್ಡರ, ರತ್ನಾಕರ ಗಾಂವಕರ, ಸಾವಿತ್ರಿ ಬಡಿಗೇರ, ಉಮಾ ಹನುಮಸಾಗರ, ಸುನಂದಾ ಕುಂಬಾರ ಇದ್ದರು.
