ದಾಂಡೇಲಿ: ಹುಬ್ಬಳ್ಳಿ ಯಲ್ಲಿರುವ ಕೆ.ಎಲ್.ಇ. ಭುಮರಡ್ಡಿ ಕಾಲೇಜಿನ ‘ಆರ್ಟಿಫಿಷಿಯಲ್ ಇಂಟಲಿಜೆನ್ಸಿ’ ವಿಭಾಗದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಾನಸಾ ಬಿ. ವಾಸರೆ ಬಹುಮತದಿಂದ ಆಯ್ಕೆಯಾಗಿದ್ದಾರೆ .
ಇತ್ತೀಚಿಗೆ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಕೇ.ಎಲ್.ಇ. ಭುಮರಡ್ಡಿ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿಯ ಐದನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿರುವ ಮಾನಸಾ ವಾಸರೆ ದಾಂಡೇಲಿಯ ಪತ್ರಕರ್ತ ಬಿ. ಎನ್. ವಾಸರೆ ಹಾಗೂ ಜಲಜಾ ವಾಸರೆ ದಂಪತಿಗಳ ಮಗಳಾಗಿದ್ದಾಳೆ. ಬಾಲ್ಯದಿಂದಲೂ ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಮಾನಸಾ ವಾಸರೆ ತಮ್ಮ ಆರನೇ ವಯಸ್ಸಿನಿಂದಲೇ ಭರತನಾಟ್ಯ ಕಲಾವಿದೆಯಾಗಿ ವೇದಿಕೆ ಏರಿದವಳು. ಭರತನಾಟ್ಯದಲ್ಲಿ ಕೂಡ ಆಗಿರುವ ಮಾನಸಾ ಪ್ರೌಢ ಶಿಕ್ಷಣ ವಿಭಾಗದ ಜೂನಿಯರ ಪರೀಕ್ಷೆಯಲ್ಲಿಯೂ ಉತ್ತೀರ್ಣರಾದವರು ಜಿಲ್ಲೆ, ರಾಜ್ಯ ಮಟ್ಟದಲ್ಲಿ ಅನೇಕ ನೃತ್ಯ ಪ್ರದರ್ಶನ ನೀಡಿದವರು. ಉತ್ತಮ ಗಾಯಕಿಯೂ ಆಗಿರುವ ಮಾನಸಾ ವಾಸರೆ ದೂರರ್ದರ್ಶನ ಚಂದನದ ಹೆಸರಾಂತ ಕಾರ್ಯಕ್ರಮವಾಗಿದ್ದ ‘ಮಧುರ ಮಧುರವೀ ಮಂಜುಳ ಗಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದಷ್ಟೇಅಲ್ಲದೆ ಜಿಲ್ಲಾ ಮತ್ತು ರಾಜ್ಯಮಟ್ಟದ ಗಾಯನ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.
ದಾಂಡೇಲಿಯ ಸೆಂಟ್ ಮೈಕಲ್ ಕಾನ್ವೆಂಟ್ ನ ವಿದ್ಯಾರ್ಥಿಯಾಗಿದ್ದ ಇವರು ಎಸ್.ಎಸ್.ಎಲ್.ಸಿ. ಯಲ್ಲಿ ರಾಜ್ಯಕ್ಕೆ ಎಂಟನೇ ರ್ಯಾಂಕ್ ಪಡೆದು ಶೈಕ್ಷಣಿಕವಾಗಿಯೂ ಸಾಧನೆ ಮಾಡಿದವರು. ಬಂಗೂರನಗರ ಪದವಿ ಪೂರ್ವ ಕಾಲೇಜಿನ ಆದರ್ಶ ವಿದ್ಯಾರ್ಥಿ ಎಂಬ ಪ್ರಶಂಸೆಗೆ ಪಾತ್ರರಾದವರು.
ಹುಬ್ಬಳ್ಳಿಯ ಕೇ.ಎಲ್.ಇ. ಭೂಮರಡ್ಡಿ ಕಾಲೇಜಿನಲ್ಲಿ ನಡೆಯುವ ಭರತನಾಟ್ಯ, ಸಂಗೀತ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿದ್ದ ಮಾನಸಾ ವಾಸರೆ ಇದೀಗ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಬಹುಮತದಿಂದ ಆಯ್ಕೆಯಾಗಿ ಸಂಘಟನೆಯಲ್ಲಿಯೂ ತಮ್ಮ ನಾಯಕತ್ವದ ಗೆಲುವು ತೋರ್ಡಿಸಿದ್ದಾರೆ.
ಅವರ ಈ ಸಾಧನೆಗೆ ದಾಂಡೇಲಿಯ ಅವರ ಹಿತೈಷಿಗಳನೇಕರು ಅಭಿನಂದಿಸಿದ್ದಾರೆ.
