ದಾಂಡೇಲಿ: ಇಲ್ಲಿನ ಪ್ರತಿಷ್ಠಿತ ಬಂಗೂರನಗರ ಪದವಿ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿರುವ ಶಶಿಕಾಂತ ಕಲ್ಲಪ್ಪಾ ಬಾಗೇವಾಡಿ ಅವರಿಗೆ ಅಮೇರಿಕಾದ ಗ್ಲೋಬಲ್ ಎನ್ವಿರೊನೈಂಟಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ (ಪಿಎಚ್.ಡಿ.) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಡಾ. ರಾಧಾಕೃಷ್ಣನ್ ಶಿಕ್ಷಕರ ಕಲ್ಯಾಣ ಸಂಘ ಮತ್ತು ವಿಶ್ವ ಶಿಕ್ಷಣ ಸಭೆಯ ಶಿಫಾರಸ್ಸಿನ ಮೇರೆಗೆ ಬಾಗೆವಾಡಿ ಅವರಿಗೆ ಈ ಪ್ರತಿಷ್ಠಿತ ಗೌರವ ಒಲಿದು ಬಂದಿದ್ದು, ಇದು ದಾಂಡೇಲಿ ನಗರ ಹಾಗೂ ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಮತ್ತು ಗ್ರಂಥಾಲಯ ಕ್ಷೇತ್ರದಲ್ಲಿನ ಇವರ ಸುದೀರ್ಘ ಹಾಗೂ ಗಣನೀಯ ಸೇವೆಯನ್ನು ಗುರುತಿಸಿ ಈ ಅಂತರರಾಷ್ಟ್ರೀಯ ಮಟ್ಟದ ಗೌರವವನ್ನು ಪ್ರದಾನ ಮಾಡಲಾಗಿದೆ.
ಶಶಿಕಾಂತ ಕಲ್ಲಪ್ಪಾ ಬಾಗೇವಾಡಿ ಅವರ ಈ ಅಪೂರ್ವ ಸಾಧನೆಗೆ ಕಾಲೇಜಿನ ಪ್ರಾಚಾರ್ಯರಾದ ಡಾ. ಬಿ. ಎಲ್. ಗುಂಡೂರ ಬಂಗೂರನಗರ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ವೃಂದದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
