ಯಲ್ಲಾಪುರದ ಮಾಗೋಡು ತಿರುವಿನಲ್ಲಿ ಶುಕ್ರವಾರ ಅಪಘಾತ ನಡೆದಿದ್ದು, ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಅಪಘಾತದ ನಂತರ ಅಪರಿಚಿತ ಲಾರಿ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ಅಂಕೋಲಾದಿoದ ಯಲ್ಲಾಪುರ ಕಡೆ ಬರುತ್ತಿದ್ದ ಕಾರಿಗೆ ಎದುರಿನಿಂದ ವೇಗವಾಗಿ ಹೊರಟ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಆ ಕಾರಿನಲ್ಲಿದ್ದ ವಿಷ್ಣುಸಾ ಹಬೀಬ ಎಂಬಾತರು ಗಂಭೀರವಾಗಿ ಪೆಟ್ಟು ಮಾಡಿಕೊಂಡು, ಅಲ್ಲಿಯೇ ಸಾವನಪ್ಪಿದ್ದಾರೆ.
ಗದಗ ಮೂಲದ ವಿಷ್ಣುಸಾ ಹಬೀಬ ಅವರು ತಮ್ಮ ಸಹೋದರ ಪವನ ಹಬೀಬ ಅವರ ಜೊತೆ ಕಾರಿನಲ್ಲಿ ಹೊರಟಿದ್ದರು. ಯಲ್ಲಾಪುರ ಪ್ರವೇಶಿಸುತ್ತಿರುವಾಗಲೇ ಲಾರಿ ಅವರ ಕಾರಿಗೆ ವೇಗವಾಗಿ ಗುದ್ದಿತು. ಪರಿಣಾಮ ಲಾರಿ ಜೊತೆ ಕಾರು ಸಹ ಜಖಂ ಆಯಿತು.
ಶುಕ್ರವಾರ ನಸುಕಿನಲ್ಲಿ ಈ ಅಪಘಾತ ನಡೆದಿದ್ದು, ಲಾರಿ ಚಾಲಕ ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಡಲಿಲ್ಲ. ಅಪಘಾತದಲ್ಲಿ ಗಾಯಗೊಂಡ ಪವನ ಹಬೀಬ ಅವರು ಅಣ್ಣನ ಸಾವಿನ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
