ದಾಂಡೇಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಸೇವೆಗೆ ಕೃತಜ್ಞತೆ ಸಲ್ಲಿಸುವ ಹಾಗೂ “ವಿಕಸಿತ ಭಾರತ-2047″ ಗುರಿಯತ್ತ ದೇಶವನ್ನು ಮುನ್ನಡೆಸುವ ಸಂಕಲ್ಪದೊಂದಿಗೆ “ಸೇವಾ ಜ್ಯೋತಿ ಯಾತ್ರೆ” ಯನ್ನು ಹಮ್ಮಿಕೊಳ್ಳಲಾಗಿದ್ದು ಈ ಭವ್ಯ ಮೆರವಣಿಗೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕರು ಪಕ್ಷದ ಕಾರ್ಯಕರ್ತ ಬಂಧುಗಳು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮಾಜಿ ಶಾಸಕ ಸುನೀಲ ಹೆಗಡೆ ಅವರು ಮಾದ್ಯಮದ ಮೂಲಕ ಮನವಿ ಮಾಡಿದ್ದಾರೆ. ಅವರು ಇಂದು ಸಂಜೆ ಮಾದ್ಯಮದ ಜೊತೆ ಮಾತನಾಡುತ್ತ ಸೇವಾ ಮನೋಭಾವ, ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಯಾತ್ರೆಯ ಅಂಗವಾಗಿ ಕಾರವಾರದಲ್ಲಿ 07-10-2026 ಬುಧವಾರ ರಂದು ಬೆಳಿಗ್ಗೆ 10.00 ಘಂಟೆಗೆ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ.
ಸೇವಾ ಜ್ಯೋತಿ ಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಯುವಕರು, ಮಹಿಳೆಯರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು “ಸೇವಾ ಜ್ಯೋತಿ-2047” ಜ್ಯೋತಿಯನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಯಾತ್ರೆಗೆ ಬೆಂಬಲ ವ್ಯಕ್ತಪಡಿಸಲಿದ್ದಾರೆ.
ಈ ಯಾತ್ರೆಯ ಮೂಲಕ 25 ವರ್ಷಗಳ ಸೇವಾ ಪಯಣ, ಅಭಿವೃದ್ಧಿಯ ಸಂಕಲ್ಪ ಹಾಗೂ “ವಿಕಸಿತ ಭಾರತ-2047’ರ ಕನಸನ್ನು ಸಾಕಾರಗೊಳಿಸುವ ಸಂದೇಶವನ್ನು ಜನರಿಗೆ ತಲುಪಿಸುವ ಕಾರ್ಯ ನಡೆಯಲಿದೆ.
ಮುಂಬರುವ ದಿನಗಳಲ್ಲಿ ಸಮಾಜದ ಹಿತಕ್ಕಾಗಿ ಕೈಗೊಳ್ಳುವ ವಿವಿಧ ಸೇವಾ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸುವುದು ಹಾಗೂ “ವಿಕಸಿತ ಭಾರತ-2047” ಸಂಕಲ್ಪವನ್ನು ಜನಮನದಲ್ಲಿ ಬಿತ್ತುವುದು ಈ ಯಾತ್ರೆಯ ಪ್ರಮುಖ ಉದ್ದೇಶವಾಗಿದ್ದು.
ಸೇವೆಯೇ ಸಂಕಲ್ಪ ವಿಕಸಿತ ಭಾರತವೇ ಗುರಿ” ಎಂಬ ಸಂದೇಶದೊಂದಿಗೆ ಸೇವಾ ಜ್ಯೋತಿ ಯಾತ್ರೆ ನಡೆಯುಲಿದ್ದು ಕಾರವಾರದಲ್ಲಿ ನಡೆಯುವ ಭವ್ಯ ಮೆರವಣಿಗೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕರು ಪಕ್ಷದ ಕಾರ್ಯಕರ್ತ ಬಂದುಗಳು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಬಿಜೆಪಿ ಘಟಕದ ಹಳಿಯಾಳ ತಾಲೂಕಾ ಅಧ್ಯಕ್ಷ ವಿಠ್ಠಲ ಸಿದ್ದನ್ನವರ,ದಾಂಡೇಲಿ ತಾಲೂಕಾ ಅಧ್ಯಕ್ಷ ಬುಧವಂತಗೌಡ ಪಾಟೀಲ, ಜೋಯಿಡಾ ತಾಲೂಕಾ ಅಧ್ಯಕ್ಷ ಶಿವಾಜಿ ಗೋಸಾವಿ ಅವರು ಮನವಿ ಮಾಡಿದ್ದಾರೆ.
