ದಾಂಡೇಲಿ : ಶಿರಸಿಯಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದಾಂಡೇಲಿ ಮತ್ತು ಅಂಬಿಕಾನಗರದ ಸ್ವರಕ್ಷ ಶೂರ್ ಶಿಕ್ಷಣ ಕರಾಟೆ ಅಕಾಡೆಮಿಯ ವಿದ್ಯಾರ್ಥಿಗಳು 17 ಚಿನ್ನದ ಪದಕ ಹಾಗೂ 1 ಬೆಳ್ಳಿ ಪದಕದೊಂದಿಗೆ ಅತ್ಯುತ್ತಮ ಸಾಧನೆ ಮೆರೆದು ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ.
ಈ ಸ್ಪರ್ಧೆಯಲ್ಲಿ ಗೆದ್ದು ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾದ ಸ್ವರಾಜ್ ಸಾವಂತ್, ಆದಿತ್ಯ ಗುರವ್, ಅಂಜುಮ್ ಜಮಾದಾರ್, ವಿರಾಜ್ ಅಗಸಿಮನಿ, ಅದಿತಿ ವಾಲೇಕರ್, ಅವಂತಿ ತಿಗಡಿ, ಬೃಂದಾ ಕುಣಕಿಕೊಪ್ಪ, ಫೈಜಾನ್ ಜಮಾದಾರ್, ಸಂತೋಷ್ ಗವಸ, ರುತ್ವಿಕ್ ಗವಸ, ಸ್ವರ್ಣಲತಾ ರೆಡ್ಡಿ, ಶ್ರೀಕರ್ ನಾಯಕ, ಅವಂತಿಕಾ ಧಾರವಾಡ್ಕರ, ಶ್ರುತಿಕಾ, ಪ್ರಗತಿ ಸಾವಂತ್, ತರಣಾ ಮತ್ತು ದೀಪ್ತಾನುಷ್ ಅವರು ರಾಜ್ಯ ಮಟ್ಟದ ಎಸ್.ಜಿ.ಎಫ್.ಐ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇದೇ ಅಕಾಡೆಮಿಯ ವಿದ್ಯಾರ್ಥಿನಿ ಆರಾಧ್ಯ ಅವರು ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಮುಖ್ಯ ತರಬೇತುದಾರ ಶಿಹಾನ್ ಸಾಗರ್ ಆರ್. ಜಾಧವ್ ಹಾಗೂ ತರಬೇತುದಾರರಾದ ಗಣೇಶ್ ಲಮಾಣಿ, ಕಿರಣ್ ಮಿರಾಶಿ, ಪಂಚಮ್ ಶೇಜ್ವಾಡ್ಕರ ಮತ್ತು ಶ್ರೇಯಾ ಸಾವಂತ್ ಅವರು ತರಬೇತಿ ನೀಡಿದ್ದಾರೆ.
